Support Centre2019-07-25T09:31:21+00:00

ಬೆಂಬಲ ಕೇಂದ್ರ

ರಾಜ್ಯದಲ್ಲಿ ಕೃಷಿ ವಾಣಿಜ್ಯ ಉದ್ಯಮ ಮತ್ತು ಆಹಾರ ಸಂಸ್ಕರಣೆ ವಲಯವು ಇನ್ನೂ ಪ್ರಾರಂಭ ಹಂತದಲ್ಲಿದ್ದು ಮತ್ತಷ್ಟು ಬೆಂಬಲ ಹಾಗೂ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಈ ವಲಯಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಇಡೀ ರಾಜ್ಯವನ್ನು ಒಂದೇ ವಲಯವನ್ನಾಗಿ ಘೋಷಣೆ ಮಾಡಲಾಗಿದೆ ಹಾಗೂ ಈ ನೀತಿಯಡಿ ಪ್ರಕಟಿಸಿದ ರಿಯಾಯಿತಿ, ಸೌಲಭ್ಯಗಳು ರಾಜ್ಯದ ಎಲ್ಲಾ ಭಾಗಗಳಲ್ಲಿ ಏಕರೂಪದಲ್ಲಿ ದೊರೆಯುತ್ತವೆ. ಇದರಿಂದ ಕೃಷಿ ವಾಣಿಜ್ಯ ಹಾಗೂ ಆಹಾರ ಸಂಸ್ಕರಣಾ ಉದ್ಯಮಗಳು ರಾಜ್ಯದ ಎಲ್ಲಾ ಭಾಗಗಳಲ್ಲಿ ಬೆಳವಣಿಗೆ ಹೊಂದಲು ಸಹಾಯಕಾರಿಯಾಗುತ್ತದೆ.

ಹಾಲಿ ಇರುವ ಏಕಗವಾಕ್ಷಿ ಪರವಾನಿಗೆ ವ್ಯವಸ್ಥೆಯನ್ನೇ ಕೃಷಿ ವಾಣಿಜ್ಯ ಉದ್ಯಮ ಮತ್ತು ಆಹಾರ ಸಂಸ್ಕರಣಾ ವಲಯದ ಯೋಜನೆಗಳನ್ನು ಪರಿಶೀಲಿಸಿ ಪರವಾನಿಗೆ ನೀಡುವುದಕ್ಕೆ ಮುಂದುವರೆಸಲಾಗುವುದು. ರಾಜ್ಯದಲ್ಲಿ ಆಹಾರ ಸಂಸ್ಕರಣಾ ಉದ್ದಿಮೆಯನ್ನು ಸ್ಥಾಪಿಸಲು ಕೆಳಕಂಡ ಸ್ಥಳಗಳಲ್ಲಿ ಜಮೀನು ಲಭ್ಯವಿದೆ

ಹೆಸರು ಭೂವ್ಯಾಪ್ತಿ
(ಎಕರೆ)
ಸ್ಥಳ ಪ್ರಸ್ತುತ ಸ್ಥಿತಿ
ಆಹಾರ ಕರ್ನಾಟಕ
ನಿಯಮಿತ
97.36 ಸೋಗಾನೆ ಗ್ರಾಮ,
ಶಿವಮೊಗ್ಗ ತಾಲ್ಲೂಕು
ಮತ್ತು ಜಿಲ್ಲೆ
ಶಿವಮೊಗ್ಗ ಜಿಲ್ಲಾಧಿಕಾರಿಯವರ ಮೂಲಕ
ರೈತರಿಂದ ಸ್ವಾಧೀನಪಡಿಸಿಕೊಂಡ ಖಾಲಿ
ಭೂಮಿ. ಎಫ್‍ಕೆಎಲ್ ಹೆಸರಿನಲ್ಲಿ
ಆಹಾರ ಕರ್ನಾಟಕ
ನಿಯಮಿತ
75 ಇಟ್ಟಂಗಿಹಾಳ್ ಗ್ರಾಮ,
ವಿಜಯಪುರ ತಾಲ್ಲೂಕು
ಮತ್ತು ಜಿಲ್ಲೆ
ವಿಜಯಪುರ ಜಿಲ್ಲಾಧಿಕಾರಿಯವರ ಮೂಲಕ
ರೈತರಿಂದ ಸ್ವಾಧೀನಪಡಿಸಿಕೊಂಡ ಖಾಲಿ
ಭೂಮಿ.
ಎಫ್‍ಕೆಎಲ್ ಹೆಸರಿನಲ್ಲಿ
ಆಹಾರ ಪಾರ್ಕ್ ಭೂ ಪ್ರದೇಶ
ಮೆ|| ಇನ್ನೋವ ಅಗ್ರಿ
ಬಯೋ ಪಾರ್ಕ್,
ಮಾಲೂರು
87 ಕೆಐಎಡಿಬಿ ಕೈಗಾರಿಕಾ
ಪ್ರದೇಶ, ಮಾಲೂರು,
ಕೋಲಾರ ಜಿಲ್ಲೆ
43.70 ಎಕರೆ ಖಾಲಿ ಭೂಮಿ
ಮೆ|| ಅಕ್ಷಯ
ಫುಡ್ ಪಾರ್ಕ್,
ಹಿರಿಯೂರು
106 ಹುಚ್ಚವನಹಳ್ಳಿ ಗ್ರಾಮ,
ಹಿರಿಯೂರು ತಾಲ್ಲೂಕು
ಚಿತ್ರದುರ್ಗ ಜಿ¯
61.06 ಎಕರೆ ಖಾಲಿ ಭೂಮಿ
ಮೆ|| ಗ್ರೀನ್
ಫುಡ್ ಪಾರ್ಕ್,
ಬಾಗಲಕೋಟೆ
100 ಕೆಐಎಡಿಬಿ ನವನಗರ
ಆಗ್ರೋಟೆಕ್ ಪಾರ್ಕ್,
ಬಾಗಲಕೋಟೆ ತಾಲ್ಲೂಕು
ಮತ್ತು ಜಿಲ್ಲೆ
52.25 ಎಕರೆ ಖಾಲಿ ಭೂಮಿ
ಮೆ. ಜೇವರ್ಗಿ ಫುಡ್
ಪಾರ್ಕ್, ಜೇವರ್ಗಿ
105 ಜೇವರ್ಗಿ – ಬಿಜಾಪುರ
ರಸ್ತೆ, ಜೇವರ್ಗಿ,
ಕಲಬುರಗಿ ಜಿಲ್ಲೆ
59.39 ಎಕರೆ ಖಾಲಿ ಭೂಮಿ

ಕರ್ನಾಟಕದಲ್ಲಿ ಕೃಷಿ ವಾಣಿಜ್ಯ ಉದ್ಯಮ ಮತ್ತು ಆಹಾರ ಸಂಸ್ಕರಣೆ ವಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ಅಂತರ್ಜಾಲ ನಿರ್ವಹಣೆ ಮಾಡುವ ಮೂಲಕ ನೆರವು ನೀಡುವುದಾಗಿದೆ. ಮಾಹಿತಿ ಕೇಂದ್ರವು ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ಉದ್ಯಮ, ಮೂಲಭೂತಸೌಕರ್ಯ ಪೂರೈಕೆದಾರರು, ಕರ್ನಾಟಕದ ಪ್ರಮುಖ ರಫ್ತು ತಾಣಗಳು ಮತ್ತು ರಾಜ್ಯದಲ್ಲಿನ ಕೃಷಿ ವಾಣಿಜ್ಯ ಉದ್ಯಮ ಮತ್ತು ಆಹಾರ ಸಂಸ್ಕರಣಾ ವಲಯದ ಇತರೆ ವಿಷಯಗಳ ದತ್ತಾಂಶಗಳನ್ನು ಕ್ರೋಢೀಕರಿಸುತ್ತದೆ. ಸಂಬಂಧಪಟ್ಟ ಇಲಾಖೆಗಳು, ಕೈಪಿಡಿಗಳು / ಶ್ವೇತಪತ್ರಗಳು / ಆಸಕ್ತ ಉದ್ದಿಮೆಗಳು ಹಾಗೂ ಕೈಗಾರಿಕಾ ಭವನಗಳಿಗೆ ಪ್ರಕಟಣೆಗಳು ಇತ್ಯಾದಿಗಳನ್ನು ಆಹಾರ ಮತ್ತು ಕೃಷಿ ವಾಣಿಜ್ಯ ಸಂಸ್ಕರಣೆ ವಲಯದಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ತಿಳುವಳಿಕೆ ನೀಡಲು ಅನುವಾಗುವಂತೆ ಕಳುಹಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕರ್ನಾಟಕದ ರೈತ ಸಂಪರ್ಕ ಕೇಂದ್ರಗಳು / ಜಿಲ್ಲಾ ಕೈಗಾರಿಕಾ ಕೇಂದ್ರಗಳನ್ನು ಮಾಹಿತಿ ಕೇಂದ್ರಗಳನ್ನಾಗಿ ಉಪಯೋಗಿಸಿಕೊಳ್ಳಲಾಗುವುದು.

ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮವು ಬ್ಯಾಂಕ್‍ಗಳಿಗೆ ಸಲ್ಲಿಸಲು ಯೋಗ್ಯವಾದ ಯೋಜನಾ ವರದಿಗಳನ್ನು ಸಿದ್ಧಪಡಿಸಲು ಅರ್ಹವಾದ ಸಲಹೆಗಾರರನ್ನು ಗುರುತಿಸುವ ಹಾಗೂ ಅವರನ್ನು ಎಂಪ್ಯಾನೆಲ್ ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿದೆ. ಈ ಸಂಬಂಧ ನೆರವು ನೀಡುವ, ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕಾ ವಿಶ್ವವಿದ್ಯಾಲಯ, ಪಶುವಿಜ್ಞಾನ ವಿಶ್ವವಿದ್ಯಾಲಯ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ, ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಮತ್ತು ಇತರ ಮಾನ್ಯತೆ ಹೊಂದಿದ ಸಂಸ್ಥೆಗಳನ್ನು ಸಹ ಸದರಿ ಮಾಹಿತಿ ಕೇಂದ್ರದ ವ್ಯಾಪ್ತಿಯಲ್ಲಿ ತರಲಾಗುವುದು.

ಕೃಷಿ ವಾಣಿಜ್ಯ ಉದ್ಯಮ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಆಸಕ್ತಿ / ಪರಿಣಿತಿ ಹೊಂದಿರುವ

ಹಾಗೂ ಇತರೇ ದೇಶಗಳಲ್ಲಿ ನೆಲೆಸಿರುವ ಅನೇಕ ಅನಿವಾಸಿ ಕನ್ನಡಿಗರು ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ವಹಿಸಿರುತ್ತಾರೆ. ಅಂತಹ ಹೂಡಿಕೆದಾರರಿಂದ ಸ್ವೀಕರಿಸಲಾದ ನಿರ್ದಿಷ್ಟ ಪ್ರಸ್ತಾವನೆಗಳನ್ನು ಆದ್ಯತೆಯ ಮೇಲೆ ಪರಿಗಣಿಸಲಾಗುವುದು ಮತ್ತು ಈ ನಿಟ್ಟಿನಲ್ಲಿ ವಿಶೇಷವಾದ ಆಸಕ್ತಿ ವಹಿಸಿ ಅವರಿಗೆ ಅಗತ್ಯ ನೆರವನ್ನು ಒದಗಿಸಲಾಗುವುದು.

ರಾಜ್ಯದಲ್ಲಿ ಉದ್ಯಮಕ್ಕೆ ಅನುಕೂಲಕರ ವ್ಯವಸ್ಥೆ ಕಲ್ಪಿಸಲು ಹಾಲಿ ಅಸ್ತಿತ್ವದಲ್ಲಿರುವ ಏಕಗವಾಕ್ಷಿ ವ್ಯವಸ್ಥೆಯನ್ನೇ ಮುಂದುವರೆಸಲಾಗುವುದು. ವ್ಯಕ್ತಿಗತ ಹೂಡಿಕೆದಾರರಿಗೆ ಆಯಾ ವಲಯದಲ್ಲಿ ವಿಶೇಷ ಸೇವೆಗಳನ್ನು ಹಾಗೂ ಅಗತ್ಯ ನೆರವನ್ನು ಒದಗಿಸುವ ಮೂಲಕ ಅವರ ಬಂಡವಾಳ ಹೂಡಿಕೆಯ ಆಸಕ್ತಿಯನ್ನು ಯೋಜನೆಗಳನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ.