Roles and Responsibility2019-07-25T09:29:14+00:00

ಪಾತ್ರಗಳು ಹಾಗೂ ಜವಾಬ್ದಾರಿಗಳು

ರಾಜ್ಯದಲ್ಲಿ ಆಹಾರ ಸಂಸ್ಕರಣೆ ಕ್ಷೇತ್ರವನ್ನು ಬಲಪಡಿಸಲು ಎಫ್‍ಕೆಎಲ್ ಈ ಕೆಳಕಂಡ ಪಾತ್ರಗಳು ಹಾಗೂ ಜವಾಬ್ದಾರಿಗಳನ್ನು ಕೈಗೊಳ್ಳಬಹುದು:

  • ಉತ್ತಮ ಸಾಮರ್ಥ್ಯವುಳ್ಳ ಪ್ರದೇಶಗಳಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು, ಸಂಭಾವ್ಯ ಹೂಡಿಕೆದಾರರು/ ಉದ್ಯಮಿಗಳು/ ರೈತರ ಗುಂಪುಗಳು/ ಒಕ್ಕೂಟಗಳು/ ಎಫ್‍ಪಿಒಗಳನ್ನು ಗುರುತಿಸುವುದು;
  • ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಅಂಗಗಳಿಂದ ಶಾಸನಬದ್ಧ ಅನುಮೋದನೆಗಳನ್ನು ಪಡೆಯಲು ಅಗತ್ಯ ನೆರವು;
  • ಉದ್ಯಮಿಗಳು/ ರೈತರ ಗುಂಪುಗಳು/ ಸಂಘಗಳಿಗೆ ಬ್ಯಾಂಕುಗಳ ಜೊತೆ ಪರಸ್ಪರ ಭೇಟಿ ಮಾಡಿ ಚರ್ಚಿಸಲು ನೆರವನ್ನು ಒದಗಿಸುವುದು;
  • ಅರಿವು ಮೂಡಿಸುವ ಶಿಬಿರಗಳು, ಕಾರ್ಯಾಗಾರಗಳು, ವಸ್ತುಪ್ರದರ್ಶನಗಳು ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಯೋಜನೆಯ ಬಗ್ಗೆ ಅರಿವು ಮೂಡಿಸುವುದು;
  • ವಿವಿಧ ಚಟುವಟಿಕೆಗಳನ್ನು ನಡೆಸಲು ಪರಿಣಾಮಕಾರಿ ಹಾಗೂ ಸಮಯೋಚಿತ ಹಣ ವರ್ಗಾವಣೆ ವ್ಯವಸ್ಥೆ;
  • ರಾಜ್ಯದಲ್ಲಿ ಯೋಜನೆಯ ನಿಗಾವಣೆ;
  • ಬಿಟುಬಿ ಹಾಗೂ ಬಿ2ಜಿ ಸಭೆಗಳ ಆಯೋಜನೆ.